ಶಂಕರ್ ಐ.ಪಿ.ಎಸ್. ಈ ವಾರ ಬಿಡುಗಡೆ
Posted date: 19/May/2010

ಬಿಂದುಶ್ರೀ ಫಿಲಂಸ್ ಲಾಂಛನದಲ್ಲಿ ಗಂಡುಗಲಿ ಕೆ. ಮಂಜು ನಿರ್ಮಿಸಿರುವ ಎಂ.ಎಸ್. ರಮೇಶ್ ನಿರ್ದೇಶನದ ಶಂಕರ್ ಐ.ಪಿ.ಎಸ್. ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತಾಕತ್ ಚಿತ್ರದ ಯಶಸ್ವಿ ಜೋಡಿ ಎಂ.ಎಸ್. ರಮೇಶ್ ಹಾಗೂ ವಿಜಯ್ ಈ ಚಿತ್ರದ ಮೂಲಕ ಮತ್ತ ದಾಖಲೆ ಬರೆಯಲಿದ್ದಾರೆ. ಬಾಲಿವುಡ್ ನಟರಿಗಿಂತ ಕನ್ನಡಿಗರೇನೂ ಕಮ್ಮಿ ಇಲ್ಲ ಎಂದು ಈ ಚಿತ್ರದ ಮೂಲಕ ನಿರೂಪಿಸುವ ಪ್ರಯತ್ನ ಮಾಡಿರುವ ನಟ ವಿಜಯ್ ಈ ಚಿತ್ರಕ್ಕಾಗಿ ೬ ಪ್ಯಾಕ್ ದೇಹದಾರ್ಢ್ಯತೆ ಪ್ರದರ್ಶಿಸಿದ್ದಾರೆ. ಪೊಲೀಸ್ ಅಧಿಕಾರಿಯ ಕಥೆ ಹೊಂದಿರುವ ಈ ಚಿತ್ರಕ್ಕೆ ಗುರುಕಿರಣ್‌ರವರ ಸಂಗೀತ ಸಂಯೋಜನೆ ಇದೆ. ದಾಸರಿ ಶ್ರೀನಿವಾಸರಾವ್‌ರವರ ಛಾಯಾಗ್ರಹಣ ಇದ್ದು, ವಿಜಯ್‌ಗೆ ನಾಯಕಿಯರಾಗಿ ಕ್ಯಾಥರಿನಾ ಹಾಗೂ ರಾಗಿಣಿ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed